Posts

Showing posts from May, 2020

ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ | Guru Basava Married Only One Wife i.e. Nilambike tayi

ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ Guru Basava Married Only One Wife Nilambike . ಪರಿವಿಡಿ (index)  "ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ (ಪುಟ - ೩೧೬ ರಿಂದ ೩೨೩). ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ ಕ್ರಾಂತಿಕಾರಿ ವಿಚಾರಶೀಲರೂ, ಸ್ತ್ರೀ ವಿಮೋಚನಾವಾದಿಯೂ, ಸ್ತ್ರೀ ಸಮತಾವಾದಿಯೂ ಆದ ಬಸವಣ್ಣನವರು ಇಬ್ಬರು ಹೆಂಡತಿಯರನ್ನು ಹೊಂದಿದ್ದರೆ ? ಮೊದಲ ಹೆಂಡತಿಗೆ ಮಕ್ಕಳಾಗಲಿಲ್ಲವೆಂದೆ ? ಅಥವಾ ನೀಲಾಂಬಿಕೆ ತನ್ನ ಚೆಲುವು-ನಡೆನುಡಿಗಳಿಂದ ಮನಸೆಳೆದಳೆ ? ಅಥವಾ ಬಿಜ್ಜಳ ಮಹಾರಾಜನು ತನ್ನ ವಚನ ರಕ್ಷಣೆಗಾಗಿ ಬಸವಣ್ಣನವರನ್ನು ತಮ್ಮ ತತ್ಯದಿಂದ ದೂರಸರಿಯುವಂತೆ ಮಾಡಿದನೆ ? ಹೀಗೆಲ್ಲ ಸಂಶಯಗಳು ಉಳಿದವರಂತೆ ನಮಗೂ ಕಾಡುತ್ತಿದ್ದವು. ಕ್ರಾಂತಿಯೋಗಿ ಬಸವಣ್ಣ ಚಲನ ಚಿತ್ರದಲ್ಲಿ ಹೀಗೇ ಚಿತ್ರಿಸಿರುವೆವಲ್ಲದೆ ತೀರಾ ಇತ್ತೀಚಿನವರೆಗೆ ಹಾಗೆಯೇ ತಿಳಿದಿದ್ದೆವು ಮತ್ತು ಇನ್ನಿತರ ಪುಸ್ತಕಗಳಲ್ಲೂ ಹಾಗೆಯೇ ಬರೆದಿದ್ದೆವು. ದಿವಂಗತ ಹೆಚ್.ದೇವೀರಪ್ಪನವರ ಒಂದು ಲೇಖನ “ಬಸವರಾಜನರಸಿಯರು'' (ಧರ್ಮದುಂದುಭಿ-ಕಲ್ಯಾಣ ಕಿರಣ ವಿಶೇಷಾಂಕ ೧೯೮೭ ಸೆಪ್ಟಂಬರ- ಅಕ್ಟೋಬರ್) ಓದಿದಾಗ ನಮ್ಮ ಚಿಂತನೆಗೆ ಹೊಸ ದಿಕ್ಕು ದೊರಕಿತು. ಶ್ರೀ ದೇವೀರಪ್ಪನವರ ಹೆಸರನ್ನು ಈ ವಿಷಯವಾಗಿ ಖಂಡಿತವಾಗಿಯೂ ಹೇಳುವೆವು. ಕೆಲವು ದೊಡ್ಡ ದೊಡ್ಡ ಸಾಹಿತಿಗಳು ನಮ್ಮ ಅನೇಕ ಹೊಸ ಸಂಶೋಧನಾತ್ಮಕ ವಿಚಾರಗಳನ್ನು