ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ | Guru Basava Married Only One Wife i.e. Nilambike tayi
ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ
Guru Basava Married Only One Wife Nilambike .
ಪರಿವಿಡಿ (index)
"ವಿಶ್ವಧರ್ಮ ಪ್ರವಚನ" ಪುಸ್ತಕ (ಪ್ರ: ೧೯೮೭) ದಿಂದ ಅಯ್ದ ಭಾಗ (ಪುಟ - ೩೧೬ ರಿಂದ ೩೨೩).
ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ
ಕ್ರಾಂತಿಕಾರಿ ವಿಚಾರಶೀಲರೂ, ಸ್ತ್ರೀ ವಿಮೋಚನಾವಾದಿಯೂ, ಸ್ತ್ರೀ ಸಮತಾವಾದಿಯೂ ಆದ ಬಸವಣ್ಣನವರು ಇಬ್ಬರು ಹೆಂಡತಿಯರನ್ನು ಹೊಂದಿದ್ದರೆ ? ಮೊದಲ ಹೆಂಡತಿಗೆ ಮಕ್ಕಳಾಗಲಿಲ್ಲವೆಂದೆ ? ಅಥವಾ ನೀಲಾಂಬಿಕೆ ತನ್ನ ಚೆಲುವು-ನಡೆನುಡಿಗಳಿಂದ ಮನಸೆಳೆದಳೆ ? ಅಥವಾ ಬಿಜ್ಜಳ ಮಹಾರಾಜನು ತನ್ನ ವಚನ ರಕ್ಷಣೆಗಾಗಿ ಬಸವಣ್ಣನವರನ್ನು ತಮ್ಮ ತತ್ಯದಿಂದ ದೂರಸರಿಯುವಂತೆ ಮಾಡಿದನೆ ? ಹೀಗೆಲ್ಲ ಸಂಶಯಗಳು ಉಳಿದವರಂತೆ ನಮಗೂ ಕಾಡುತ್ತಿದ್ದವು.
ಕ್ರಾಂತಿಯೋಗಿ ಬಸವಣ್ಣ ಚಲನ ಚಿತ್ರದಲ್ಲಿ ಹೀಗೇ ಚಿತ್ರಿಸಿರುವೆವಲ್ಲದೆ ತೀರಾ ಇತ್ತೀಚಿನವರೆಗೆ ಹಾಗೆಯೇ ತಿಳಿದಿದ್ದೆವು ಮತ್ತು ಇನ್ನಿತರ ಪುಸ್ತಕಗಳಲ್ಲೂ ಹಾಗೆಯೇ ಬರೆದಿದ್ದೆವು. ದಿವಂಗತ ಹೆಚ್.ದೇವೀರಪ್ಪನವರ ಒಂದು ಲೇಖನ “ಬಸವರಾಜನರಸಿಯರು'' (ಧರ್ಮದುಂದುಭಿ-ಕಲ್ಯಾಣ ಕಿರಣ ವಿಶೇಷಾಂಕ ೧೯೮೭ ಸೆಪ್ಟಂಬರ- ಅಕ್ಟೋಬರ್) ಓದಿದಾಗ ನಮ್ಮ ಚಿಂತನೆಗೆ ಹೊಸ ದಿಕ್ಕು ದೊರಕಿತು. ಶ್ರೀ ದೇವೀರಪ್ಪನವರ ಹೆಸರನ್ನು ಈ ವಿಷಯವಾಗಿ ಖಂಡಿತವಾಗಿಯೂ ಹೇಳುವೆವು. ಕೆಲವು ದೊಡ್ಡ ದೊಡ್ಡ ಸಾಹಿತಿಗಳು ನಮ್ಮ ಅನೇಕ ಹೊಸ ಸಂಶೋಧನಾತ್ಮಕ ವಿಚಾರಗಳನ್ನು ಫಕ್ಕನೆ ಎತ್ತಿಕೊಂಡು ತಮ್ಮ ಪುಸ್ತಕದಲ್ಲಿ ಬರೆದು, ಆ ಬಗ್ಗೆ ನಮ್ಮ ಗ್ರಂಥಗಳನ್ನು ಮಾತ್ರ ಉಲ್ಲೇಖಿಸದೆ, ಇನ್ನಿತರರ ಬೇರೆ ಬೇರೆ ಗ್ರಂಥಗಳನ್ನು ಉಲ್ಲೇಖಿಸುವರು. ಈ ಅಪ್ರಾಮಾಣಿಕತನವನ್ನು ಸಾಕಷ್ಟು ಗುರುತಿಸಿದ್ದೇವೆ.
ಈಗ ನಮಗೆ, ಬಸವಣ್ಣನವರಿಗಿದ್ದುದು ಒಬ್ಬಳೇ ಧರ್ಮಪತ್ನಿ ಎಂಬ ಬಗ್ಗೆ ದೃಢವಾದ ನಿರ್ಧಾರ ಮೂಡಿದೆ.
೧. ಗಂಗಾಂಬಿಕೆ ಬಸವಣ್ಣನವರ ಸೋದರ ಮಾವ ಬಲದೇವ ಮಂತ್ರಿಯ ಪುತ್ರಿ ; ವಿವಾಹ ಪೂರ್ವದ ಹೆಸರು ಗಂಗಮ್ಮ, ಗಂಗಾಂಬಿಕೆ.
೨. ವಿವಾಹಾನಂತರ ಸಾಮಾನ್ಯವಾಗಿ ಕನ್ನೆಗೆ ಹೆಸರು ಬದಲಿಸುವರು. ಆಕೆಗೆ ಸುಂದರವಾದ ನೀಲಿಯ ಕಣ್ಣುಗಳು ಇದ್ದ ಕಾರಣ 'ನೀಲಲೋಚನೆ' ಎಂದು ಬಸವಣ್ಣನವರು ಕರೆದಿರಲೂ ಸಾಕು. ಗೌರವ ಸೂಚಕವಾಗಿ ಇನ್ನಿತರ ಕೆಲವರು ನೀಲಾಂಬಿಕಾದೇವಿ, ನೀಲಲೋಚನೆಯಮ್ಮ ಎಂದು ಕರೆದರೆ ಆತ್ಮೀಯರು ನೀಲಮ್ಮ ಎಂದಿದ್ದಾರೆ.
ಒಂದು ಹೊಸ ಹೆಸರು ಇಟ್ಟ ಬಳಿಕವೂ ಕೆಲವರು ಮೊದಲ ಹೆಸರನ್ನು ಕರೆಯುತ್ತಿರುವರು. ಹೀಗಾಗಿ ಗಂಗಮ್ಮ, ಗಂಗಾ, ಗಂಗಾಂಬಿಕೆ ಎಂದು ಪೂರ್ವ ಪರಿಚಯದವರು, ನೀಲಮ್ಮ, ನೀಲಾಂಬಿಕೆ, ನೀಲಲೋಚನೆಯಮ್ಮ, ನೀಲಗಂಗಾ ಎಂದು ಮತ್ತೆ ಕೆಲವರು ಕರೆದುದು. ನಂತರದ ಕವಿಗಳು ಇಬ್ಬರು ಹೆಂಡತಿಯರನ್ನು ಕಲ್ಪಿಸಲು ಕಾರಣವಾಗಿದೆ.
ಈ ನಿರ್ಧಾರ ಕೇವಲ ಊಹಾತ್ಮಕವಾಗಿರದೆ ಸಾಧಾರದಿಂದ ಕೂಡಿದೆ ಎನ್ನಲು ಕೆಲವು ಉದಾಹರಣೆ ಕೊಡುವೆ.
೧. ಬಸವಣ್ಣನವರು ತಮ್ಮ ವಚನಗಳಲ್ಲಿ ನೀಲಾಂಬಿಕೆಯ ಹೆಸರು ಮಾತ್ರ ಬಳಸಿರುವರು. ಒಂದು ವೇಳೆ ಮೊದಲ ಹೆಂಡತಿ ಇದ್ದರೆ ಆಕೆಯನ್ನು ಅಷ್ಟು ಕಡೆಗಣಿಸಿ ಮಾತನಾಡುತ್ತಿದ್ದರೆ.?
* ಭ್ರಕುಟಿಯ ಹಿಡಿದು ನಿಟಿಲ ನಯನನ ಬೆರೆದಳು ಅಕ್ಕಮಹಾದೇವಿ
ಶಿಖಾಚಕ್ರವಿಡಿದು ಶಿವನ ಬೆರೆದಳು ಅಕ್ಕನಾಗಾಯಿ
ಪಶ್ಚಿಮ ಚಕ್ರವಿಡಿದು ಪರಮನಾದಳು -
ಕೂಡಲಸಂಗಮದೇವನ ಮರುಳು ಮಗಳು ನೀಲಲೋಚನೆ, ಚನ್ನಬಸವಣ್ಣ ! - ಬ.ವ.
ಈ ವಚನದಲ್ಲಿ ನೀಲಲೋಚನೆ, ಎಂತಹ ಉನ್ನತ ಸ್ಥಿತಿಯನ್ನು (ತಮ್ಮ ನೆರವಿನಿಂದ) ತಲ್ಪಿದ್ದಾಳೆ ಎಂಬ ಅಭಿಮಾನದ ವರ್ಣನೆಯಿದೆ. ಅದನ್ನು ಚನ್ನಬಸವಣ್ಣನ ಮುಂದೆ ಆಡಿ ತೋರಿಸುತ್ತಿದ್ದಾರೆ. ಆದರೆ ತಮ್ಮ ಹೆಂಡತಿಯನ್ನು ತಾವೇ ಕೊಂಡಾಡುತ್ತಾರೆಂದು. ತಿಳಿದುಬಿಟ್ಟಾನು ಎಂಬ ಸಂಕೋಚವೂ ಇದೆ. ಆ ಅಭಿಮಾನ ಮತ್ತು ಸಂಕೋಚಗಳು ಮರುಳು ಮಗಳು ನೀಲಲೋಚನೆ ಎಂಬಲ್ಲಿ ವ್ಯಕ್ತವಾಗಿದೆ.
(ನೋಡು ಚನ್ನಬಸವಣ್ಣ ದೇವನ ಹುಚ್ಚು ಮಗಳು ಎಂಥಾ ಸ್ಥಿತಿ ಸಾಧಿಸಿ ಬಿಟ್ಟಳು ! ಎಂದು ಉದ್ಗಾರ ತೆಗೆದಿದ್ದಾರೆ. ಚನ್ನಬಸವಣ್ಣನನ್ನು ಇಲ್ಲಿ ಸಾಕ್ಷಿಯಾಗಿರಿಸಿ ಕೊಂಡಿದ್ದಾರೆ. ಏಕೆಂದರೆ ಚನ್ನಬಸವಣ್ಣನು ನೀಲಾಂಬಿಕೆ ಹಂತ ಹಂತವಾಗಿ ಮೇಲೇರಿರುವುದನ್ನು ಗಮನಿಸಿದ ವ್ಯಕ್ತಿ.) .
ಅಕ್ಕಮಹಾದೇವಿಯನ್ನು ಕುರಿತು ಘಟ್ಟಿವಾಳಯ್ಯನವರು ನುಡಿದ ವಚನದಲ್ಲಿ
ಅಪ್ಪ ಬಸವಣ್ಣನ ಮೋಹದ ಮಗಳೆ
ಅವ್ವ ನೀಲವ್ವನ ಸುಚಿತ್ರದ ಪುತ್ಥಳಿಯೆ.
ಎಂದು ಬರುತ್ತದೆ. ನೀಲಮ್ಮನನ್ನು ಕುರಿತು ಉರುಟಣೆಯ ಪದ, ಹಾಡುಗಳು ಮತ್ತು ಸಾಕಷ್ಟು ಸ್ತೋತ್ರಗಳು ರಚಿಸಲ್ಪಟ್ಟಿವೆ.
ಕಾಲಜ್ಞಾನದ ವಚನಗಳು ಶರಣ ಧರ್ಮದ ಉಗಮ, ಪ್ರಗತಿ, ಸಂಕಷ್ಟ ಕುರಿತು ಐತಿಹಾಸಿಕ ದಾಖಲೆ ನೀಡುವುವು. ಅಲ್ಲಿ ಎರಡು ಕಡೆ ಹೀಗೆ ಪ್ರಸ್ತಾಪವಾಗಿದೆ:
೧. ಶ್ರೀ ಬಸವಣ್ಣನವರು ನೀಲಲೋಚನೆ ಅಮ್ಮನವರನ್ನು ಮದುವೆಯಾಗಿ ಪ್ರಧಾನಿ ಪಟ್ಟವನ್ನು ಮಾಡಿಕೊಂಡು ಇರುವಾಗ್ಗೆ - (ಪುಟ ೨೬೩)
೨. ಕಲ್ಯಾಣ ಪಟ್ಟಣಕ್ಕೆ ಒಡೆಯರಾಗಿ ಬಂದು ನಿಂತು ಎಲ್ಲ ತರದ ಅನೇಕ ಲಿಪಿಗಳನ್ನು ಓದಿ, ಪವಾಡಂಗಳನ್ನು ಗೆಲಿದು ಆಮೇಲೆ ಸಿದ್ದರಸನೆಂಬ ಮಂತ್ರಿಗಳ ಮಗಳಾದ ನೀಲಾಂಬಿಕೆಯವರನ್ನು ಮದುವೆಯಾಗಿ ಪ್ರಧಾನಿಪಟ್ಟವನ್ನು ಸಂಪಾದಿಸಿಕೊಂಡು ಇರುತ್ತಿದ್ದರು.
- ಚನ್ನಣ್ಣನವರ ಕಾಲಜ್ಞಾನ ಪುಟ ೩೦೦
ಆ ಕಾಲಕ್ಕೆ ಇಬ್ಬರು ಹೆಂಡತಿಯರನ್ನು ವಿವಾಹವಾಗುವುದು ಅಪರಾಧವಾಗಿರಲಿಲ್ಲ; ಹೆಂಡಿರು ಜಾಸ್ತಿ ಇದ್ದಷ್ಟು ಗೌರವ ಸೂಚಕ ಎಂದು ತಿಳಿಯುವ ಕಾಲವಾಗಿರುವಾಗ ಕಾಲಜ್ಞಾನ ವಚನ ಹೇಳಿದವರು “ಗಂಗಾಂಬಿಕೆ ಮತ್ತು ನೀಲಾಂಬಿಕೆ ಅಮ್ಮನವರುಗಳನ್ನು ವಿವಾಹವಾಗಿ'' ಎನ್ನಬಹುದಿತ್ತು. ಹೀಗೆ ಕಾಲಜ್ಞಾನದಲ್ಲಿ ನೀಲಲೋಚನೆ, ನೀಲಾಂಬಿಕೆ ಎಂಬ ಹೆಸರು ಮಾತ್ರವಿದೆ.
ಬಸವಣ್ಣನವರ ಸ್ವಭಾವ ಗಮನಿಸಿದರೆ ಅವರು ಒಬ್ಬ ಸಾಮಾನ್ಯ ವ್ಯಕ್ತಿಗೂ ನೋವು ಉಂಟು ಮಾಡುವ ಸ್ವಭಾವದವರಲ್ಲ. ಇಬ್ಬರು ಹೆಂಡತಿಯರಿದ್ದಿದ್ದರೆ ಇಬ್ಬರಿಗೂ ಕೂಡಲ ಸಂಗಮಕ್ಕೆ ಬರಲು ಹೇಳುತ್ತಿದ್ದರು.
ಸರ್ವಜ್ಞನ ವಚನಗಳಲ್ಲಿ ನೀಲಾಂಬಿಕೆಯ ಹೆಸರು ಹೀಗೆ ಪ್ರಸ್ತಾಪವಾಗಿದೆ.
* ಪರಮಾರ್ಥನೆಂಬಾತ ಗುರು ಚನ್ನ ಬಸವಣ್ಣ
...... ..... ...... ..... ...... .....
ಶರಣು ನೀಲವ್ವ ಸರ್ವಜ್ಞ (ಸ.ವೀ.ವ. ೬೧).
ಶ್ರೀ ಘನಲಿಂಗದೇವರ ವಚನಗಳಲ್ಲಿ ಹೀಗೆ ಇದೆ.
ಎನ್ನ ಪ್ರಾಣ ಷಟ್‌ಸ್ಥಲಕ್ಕೆ ಸಲೆಸಂದ .
ಅಕ್ಕಮಹಾದೇವಿಯವರು ಹೋದ ಬಟ್ಟೆಯಲ್ಲಿ ನಡೆಯುವುದಲ್ಲದೆ
ಕಿರುಬಟ್ಟೆಯಲ್ಲಿ ನಡೆಯದು.
ಇಂತಿವೆಲ್ಲವು ಷಟ್ಟಲವನಪ್ಪಿ ಅನುಗ್ರಹಿಸಿದ
ನೀಲಾಂಬಿಕೆಯಮ್ಮನವರ ಗರ್ಭದಲ್ಲಿ ಉದಯವಾದ
ಮೋಹದ ಕಂದನಾದ ಕಾರಣ,
ಎನಗೆ ಷಟ್ಕಲ ಮಾರ್ಗದ ವಿರತಿ ನೆಲೆಗೊಂಡು ನಿಂದಿತಯ್ಯ
ಘನಲಿಂಗಿಯ ಮೋಹದ ಚನ್ನಮಲ್ಲಿಕಾರ್ಜುನ, (ಘ.ಲಿಂ.ವ.೩೫)
ಶ್ರೀ ತೋಂಟದ ಸಿದ್ಧಲಿಂಗೇಶ್ವರರ ವಚನದಲ್ಲಿ ಹೀಗೆ ಬರುತ್ತದೆ.
ಬಸವಣ್ಣನ ಪ್ರಸಾದದಿಂದ
ಭಕ್ತಿಜ್ಞಾನ ವೈರಾಗ್ಯ ಸಂಪನ್ನನಾದೆನಯ್ಯ
ನೀಲಲೋಚನೆಯಮ್ಮನ ಪ್ರಸಾದದಿಂದ
ನಿಜಲಿಂಗೈಕ್ಯನಾದೆನಯ್ಯ. (ಷ ಜ್ಞಾ.೫೩೭)
ಹೀಗೆ ನೀಲಾಂಬಿಕೆಯ ಹೆಸರೇ ಸಮಕಾಲೀನರು ಮತ್ತು ನಂತರದ ಶರಣರು ಉಭಯತರಲ್ಲೂ ಆಗುತ್ತ ಬಂದಿದೆ.
ಕಾವ್ಯಗಳನ್ನು ತೆಗೆದುಕೊಂಡರೆ, ಅತ್ಯಂತ ಅಧಿಕೃತವೂ ಬಸವಣ್ಣನವರ ನಂತರ, ಇನ್ನೂ ಅವರನ್ನು ಕುರಿತ ಕಥೆಗಳು ಜನರ ಬಾಯಲ್ಲಿ ಜೀವಂತವಾಗಿ ಇರುವಾಗಲೇ ಸ್ವಲ್ಪ ಕಾಲದಲ್ಲಿ ರಚನೆಯಾದ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣದಲ್ಲಿ ಬಸವಣ್ಣನವರ ಹೆಂಡತಿ ಒಬ್ಬಳೇ. ಈತನೇ ಬರೆದ 'ಪಂಡಿತಾರಾಧ್ಯ ಚರಿತ್ರೆ' ಯಲ್ಲೂ ಗಂಗಾಂಬಿಕೆಯೊಬ್ಬಳ ಹೆಸರೇ ಇರುವುದು. ಬಸವ ಧರ್ಮ ಪ್ರಚಾರಕ್ಕೆ ಜಂಗಮರು ಶ್ರೀಶೈಲ ಕ್ಷೇತ್ರದಲ್ಲಿ ಧರ್ಮಪ್ರಚಾರ ಮಾಡುತ್ತ ಸಂಚರಿಸುವಾಗ ಅವರಿಂದ ವಿವರಗಳನ್ನು ಪಡೆದ ಕಾರಣ ಸೋಮನಾಥಾರಾಧ್ಯನ ಕಾವ್ಯ ಹೆಚ್ಚು ನಿಖರವಾಗಿ, ಸತ್ಯ ಸಂಗತಿಯನ್ನು ಒಳಗೊಂಡಿದೆ.
ಕೂಡಲ ಸಂಗಮದಲ್ಲಿ ಹರಿಯುವ ಕೃಷ್ಣಾನದಿಯ ಆಚೆಯ ದಂಡೆಗೆ ನೀಲಮ್ಮನ ಗುಡಿ, ಗದ್ದುಗೆ ಇವೆ. ಆ ಗುಡಿಗೆ ನೀಲಮ್ಮನ ಗುಡಿ, ನೀಲಮ್ಮನ ಗದ್ದುಗೆ ಎನ್ನುವರು ಮತ್ತು ನೀಲಗಂಗಮ್ಮನ ಗುಡಿ, ನೀಲಗಂಗಮ್ಮನ ಗದ್ದುಗೆ ಎಂದೂ ಅನ್ನುವರು. ವಿವಾಹದ ಪೂರ್ವದ ಹೆಸರು ಗಂಗಾ, ನಂತರದ್ದು ನೀಲಾ ಎರಡು ಸೇರಿ ನೀಲಗಂಗಾ ಎಂದು ಆಗಿರಲೂ ಸಾಕು. ನೀಲಿಯ ಕಣ್ಣಳು ಉಳ್ಳವಳು, 'ನೀಲಗಂಗಾ' ಎಂಬುದು ನೀಲಲೋಚನೆಯ ಗ್ರಾಮೀಣ ಭಾಷೆಯ ರೂಪಾಂತರವಾಗಿರಬಹುದು.
ಇನ್ನೆರಡು ಸಂದೇಹಗಳು ಇಲ್ಲಿ ಉಳಿಯುತ್ತವೆ.
೧. ಗಂಗಾಪ್ರಿಯ ಕೂಡಲ ಸಂಗಮದೇವ ಗಂಗಾಂಬಿಕೆ ವಚನ ಮುದ್ರಿಕೆ, ಸಂಗಯ್ಯ ನೀಲಾಂಬಿಕೆಯ ವಚನ ಮುದ್ರಿಕೆ ಎಂಬ ಕಲ್ಪನೆ ಸಾಹಿತಿಗಳಲ್ಲಿದೆ. ಕರ್ನಾಟಕ ವಿಶ್ವವಿದ್ಯಾಲಯದವರು ಪ್ರಕಟಿಸಿರುವ ೨೭ ಶಿವಶರಣೆಯರ ವಚನಗಳು ಎಂಬ ಪುಸ್ತಕದಲ್ಲಿ ಉಭಯ ವಚನ ಮುದ್ರಿಕೆಗಳಲ್ಲಿ ವಚನಗಳು ಪ್ರಕಟವಾಗಿವೆ.
ಈ ಸಂದೇಹಕ್ಕೆ ನಾನು ಕಂಡುಕೊಂಡ ಉತ್ತರವೆಂದರೆ 'ಗಂಗಾಪ್ರಿಯ ಕೂಡಲಸಂಗಮದೇವ' ಎಂದು ಮೊದಲು ನೀಲಲೋಚನೆ ವಚನಗಳನ್ನು ಬರೆಯಲು ಆರಂಭಿಸಿರಬಹುದು. ಪೂರ್ವಾಶ್ರಮದ ಹೆಸರು ಬೇಡವೆಂದು ಮತ್ತು ತನ್ನ ಹೆಸರನ್ನು ವಚನದಲ್ಲಿ ಕಾಣಿಸಿಕೊಳ್ಳುವುದು ಬೇಡವೆಂದು ಬಸವಣ್ಣನವರು ಆಕ್ಷೇಪಿಸಿರಬಹುದು. ಆದ್ದರಿಂದ ಮುಂದೆ 'ಸಂಗಯ್ಯ' ಎಂದು ಮುದ್ರಿಕೆಯನ್ನು ಬದಲಿಸಿರಬಹುದು. ಇವೆರಡನ್ನೂ ಬರೆದವಳು ಒಬ್ಬಳೇ, “ಗಂಗಾಪ್ರಿಯ' ಎಂದು ಬರೆದ ವಚನಗಳಲ್ಲಿ ಪೂರ್ವಾಶ್ರಮದ ಮೋಹ, ಮಮಕಾರ ಅಳಲು ವ್ಯಕ್ತವಾಗಿದೆ.
“ಸಾಂದ್ರವಾಗಿ ಹರಗಣ ಭಕ್ತಿಯ ಮಾಳ್ಳನೆಂತವ್ವಾ ಮಾದಲಾಂಬಿಕಾನಂದನನು, ಸಾಂದ್ರವಾಗಿ ಬಿಜ್ಜಳನ ಅರಮನೆಯ ನ್ಯಾಯವನೊಟ್ಟನೆಂತವ್ವಾ ಮಾದರಸಸುತನು.'' ಎಂದು ಒಂದು ವಚನದಲ್ಲಿ ಹೇಳುತ್ತಾಳೆ.
ಇನ್ನೊಂದು ವಚನದಲ್ಲಿ
- “ ಅವಳ ಕಂದ ಬಾಲಸಂಗ, ನಿನ್ನ ಕಂದ ಚನ್ನಲಿಂಗ ಎಂದರಮ್ಮ ಒಡೆಯರು' ಎಂಬ ಮಾತಿದೆ. ಇದರ ನೆರವಿನಿಂದ ಇಬ್ಬರು ಹೆಂಡತಿಯರಿಗೆ ಒಂದೊಂದು ಮಕ್ಕಳಿದ್ದವು ಎಂದು ನಾವು ಕಲ್ಪಿಸಿದ್ದೆವು. ಈಗ ಅನ್ನಿಸುತ್ತಿದೆ. ನಿಮ್ಮಲ್ಲಿ ಉದಾತ್ತ ಚಿಂತನೆ, ವಿಶಾಲ ಹೃದಯ ಬರಬೇಕಾದರೆ ನಾಗಲಾಂಬಿಕೆಯ ಮಗು ಚನ್ನಬಸವಣ್ಣನನ್ನು ನೀನು ಸಾಕು, ನಿನ್ನ ಮಗುವನ್ನು ಅಕ್ಕನು ಸಾಕಲಿ,'' ಎಂದು ಬಸವಣ್ಣನವರು ಸೂಚಿಸಿರಬಹುದು.
ಸಿದ್ದರಾಮೇಶ್ವರರ ವಚನ ೧೦೭ನ್ನು ಉಲ್ಲೇಖಿಸಿ ಒಬ್ಬರು ಕಲ್ಯಾಣ ಕಿರಣದ ಓದುಗರು ಪತ್ರ ಬರೆದಿದ್ದರು. ಈ ಮೊದಲೊಮ್ಮೆ ಬಸವಣ್ಣನವರಿಗೆ ಒಬ್ಬಳೇ ಹೆಂಡತಿ ಎಂದು ನಾನು ಬರೆದುದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಆ ವಚನವನ್ನು ಉಲ್ಲೇಖಿಸಿದ್ದರು.
ಅಲ್ಲಯ್ಯಗಳ ವಚನ ಎರಡಂಬತ್ತು ಕೋಟಿ
ಅಪ್ಪಯ್ಯಗಳ ವಚನ ನಾಲ್ಕು ಲಕ್ಷದ ಮೂವತ್ತಾರು ಸಾವಿರ
ಎಮ್ಮಯ್ಯಗಳ ವಚನ ವಚನಕ್ಕೊಂದು..
ನೀಲಮ್ಮನ ವಚನ ಎಂದು ಲಕ್ಷದ ಹನ್ನೊಂದು ಸಾವಿರ
ಗಂಗಾಂಬಿಕೆಯ ವಚನ ಎರಡು ಲಕ್ಷದ ಎಂಟು ಸಾವಿರ
ಎಮ್ಮಕ್ಕ ನಾಗಾಯಿಯ ವಚನ ಮೂರು ಲಕ್ಷದ ತೊಂಬತ್ತಾರು ಸಾವಿರ
ಮಡಿವಾಳಣ್ಣನ ವಚನ ಮೂರುಕೋಟಿ ಮುನ್ನೂರು
ಹಡಪದಯ್ಯಗಳ ವಚನ ಹನ್ನೊಂದು ಸಾಸಿರ.
ಮರುಳುಸಿದ್ದನ ವಚನ ಅರವತ್ತೆಂಟು ಸಾಸಿರ.
ಇಂತಪ್ಪ ವಚನ ರಚನೆಯ ಬಿಟ್ಟು,
ಕುತ್ಸಿತ ಕಾವ್ಯಾಲಂಕಾರ ನೋಡುವರ ನೋಡಿ
ಹುಡಿ ಮಣ್ಣ ಹೊಯ್ಯದೆ ಮಾಬನೆ
ಮಹಾದೇವ ಕಪಿಲಸಿದ್ಧ ಮಲ್ಲಿಕಾರ್ಜುನ. -ಸಿ. ವ. ೧೦೭
ಇದನ್ನು ಉದ್ಧರಿಸಿರುವ ಚನ್ನಬಸವಣ್ಣನವರ ವಚನಗ್ರಂಥದ ಪೀಠಿಕೆಯಲ್ಲಿ (ಪುಟ xix) ೪ ಮತ್ತು ೫ನೆಯ ವಾಕ್ಯಗಳಲ್ಲಿರುವ ಕೈಬಿಡುವಿಕೆಯ ಸೂಚನೆ ಇಲ್ಲ. ಅದೇ ಸಿದ್ದರಾಮೇಶ್ವರರ ಮೂಲಗ್ರಂಥದಲ್ಲಿ ಈ ಸೂಚನೆ ಇದೆ. ಆಗ “ ನೀಲಮ್ಮನ ವಚನ ಲಕ್ಷದ ಎಂಟು ಸಾಸಿರ'' ಎಂದು ಓದಬೇಕಾಗುತ್ತದೆ. 'ಲಕ್ಷದ ಹನ್ನೊಂದು ಸಾಸಿರ ಗಂಗಾಂಬಿಕೆಯ ವಚನ.' ಎಂಬುದನ್ನು ತೆಗೆದುಹಾಕಬೇಕಾಗುತ್ತದೆ.
ವಚನಗಳ ಮಧ್ಯೆ ಒಂದೊಂದು ವಾಕ್ಯವನ್ನು ಸೇರಿಸಲು ಯಾವುದೇ ಕಷ್ಟವಿರದ್ದರಿಂದ ವಚನಗಳ ಪ್ರತಿ ಮಾಡುವವನು ಯಾರೋ, ಗಂಗಾಂಬಿಕೆಯನ್ನು ಕಡೆಗಣಿಸಿರಬೇಕೆಂದು ಘನಔದಾರ‍್ಯದಿಂದ ಈ ವಾಕ್ಯ ಸೇರಿಸಿರಲು ಸಾಧ್ಯವಿದೆ. ಹೀಗೆ ಸಿದ್ದರಾಮೇಶ್ವರರ ವಚನ ೧೦೭ ರಲ್ಲಿ ಇರುವ ಕೆಲವು ಪದಪ್ರಕ್ಷಿಪ್ತ ಎನ್ನಲು ಅಡ್ಡಿಯಿಲ್ಲ.
ನಾವು ಶರಣರ ಮೂರ್ತಿಗಳನ್ನು ಮಾಡಿ ಮಂಟಪದಲ್ಲಿ ಕೂರಿಸಿದ್ದೇವಷ್ಟೆ, ಶರಣ ಮೇಳದ ಸಮಯಕ್ಕೆ ಬಂದಿದ್ದ ಶ್ರೀ ದಯಾನಂದ ಸ್ವಾಮಿ ಒಂದು ಪ್ರಶ್ನೆ ಕೇಳಿದರು. ಇಲ್ಲಿ ನೀಲಾಂಬಿಕೆ, ನಾಗಲಾಂಬಿಕೆ, ಕಲ್ಯಾಣಮ್ಮ ಎಲ್ಲರ ಮೂರ್ತಿಗಳಿವೆ. ಗಂಗಾಂಬಿಕೆಯದು ಇಲ್ಲ. ಏಕೆ ?” “ನಾವು ಬಹಳ ಕಾಲ ಇಬ್ಬರು ಹೆಂಡತಿಯರಿರಬೇಕೆಂದು ನಂಬಿದ್ದವು. ಇತ್ತೀಚೆಗೆ ಶ್ರೀ ದೇವಿರಪ್ಪನವರ ಲೇಖನ ಓದಿ ಆ ದಿಶೆಯಲ್ಲಿ ಚಿಂತಿಸಿ, ಬಸವಣ್ಣನವರಿಗೆ ಒಬ್ಬಳೇ ಹೆಂಡತಿ' ಎಂದು ಖಚಿತಪಡಿಸಿಕೊಂಡಿದ್ದೇವೆ. ಅದಕ್ಕೆ ಮೂರ್ತಿ ಮಾಡಿಸಿಲ್ಲ.”
'ಇಷ್ಟು ದಿವಸಗಳವರೆಗೆ ಗಂಗಾಂಬಿಕೆಯ ಅಸ್ತಿತ್ವ ಮನ್ನಿಸಿ, ಗೌರವಿಸಿಕೊಂಡು ಬಂದಿದ್ದೇವೆ. ಈಗ ಇಲ್ಲವೆನ್ನಲು ತುಂಬಾ ವೇದನೆಯಾಗುತ್ತದೆ. ಭಾವನಾತ್ಮಕ ಸಂಬಂಧ ಗಾಢವಾದುದು' ಎಂದರು. ನನಗೆ ಬಹಳ ನಗು ಬಂದಿತು. “ನಿಮ್ಮಲ್ಲೆಲ್ಲ ಶರಣರ ಬಗ್ಗೆ ಭಕ್ತಿ ಹುಟ್ಟಿಸಿದವರೇ ನಾವು. ಬಹಳಷ್ಟು ಚಿಂತನೆ ಮಾಡಿದ ಬಳಿಕ ಸತ್ಯ ಸಂಗತಿ ಗೊಚರಿಸಿದ ಮೇಲೆ ಒಪ್ಪಲು ತೊಂದರೆ ಏನು ? ನಮ್ಮ ಬುದ್ದಿ ಕೇವಲ ಭಾವುಕತೆಯ ಮೇಲೆ ಕೆಲಸ ಮಾಡದೆ ವೈಚಾರಿಕತೆಯ ಅಡಿಪಾಯದ ಮೇಲೆ ನಿಲ್ಲಬೇಕು. ಅಂಥ ಭಾವಾತಿರೇಕಕ್ಕೆ ಒಳಗಾಗಿ ಇಲ್ಲದ ವ್ಯಕ್ತಿಯನ್ನು, ಇದ್ದವರೆಂದು ಭಾವಿಸಿ, ಆ ಮೇಲೆ ಆ ನಂಬಿಕೆ ತೊರೆಯಲಾರದಷ್ಟು ಅಸಹಾಯಕರಾಗುವುದು ತಪ್ಪು. ಪಂಚಾಚಾರ್ಯವಾದಿಗಳು ರೇಣುಕಾಚಾರ್ಯರನ್ನು ಕಲ್ಪನೆಯ ಕೂಸನ್ನಾಗಿ ಹುಟ್ಟುಹಾಕಿ, ಅನೇಕ ಮೂಢಭಕ್ತರ ತಲೆಯಲ್ಲಿ ತೂರಿಸಿದರು. ಇಂದು ಮೂಢಭಕ್ತರು ಆ ಕಾಲ್ಪನಿಕ ನಂಬಿಕೆಯಿಂದ ಹೊರ ಬರಲಾರದಂತಾಗಿದ್ದಾರೆ. ನೀವೂ ಹಾಗೆ ಆದರೆ ಹೇಗೆ ?
ಮತ್ತು ಒಬ್ಬಳೇ ಹೆಂಡತಿಯೆಂಬುದನ್ನು ಖಚಿತಪಡಿಸಿ ಕಾಲ್ಪನಿಕ ವ್ಯಕ್ತಿಯನ್ನು ಕೈಬಿಡುವುದರಿಂದ ಗುರು ಬಸವಣ್ಣನವರ ಉಜ್ವಲ ವ್ಯಕ್ತಿತ್ವ ಇನ್ನಷ್ಟು ಬೆಳಗುವುದು. ಈ ಉದ್ದೇಶದಿಂದಲೇ ನಾವು ಒಬ್ಬಳೇ ಹೆಂಡತಿ ಎಂಬುದನ್ನು ಕಾಲ್ಪನಿಕವಾಗಿ ಸೃಷ್ಟಿಸಿಲ್ಲ. ಈಗ ನಮ್ಮ ಮನಸ್ಸಿಗೆ ನೂರಕ್ಕೆ ನೂರು ಸತ್ಯವೆನಿಸಿದೆ' ಎಂದು ಶ್ರೀ ದಯಾನಂದ ಸ್ವಾಮಿಗೆ ಹೇಳಿದೆನು.
*
ಗಂಗಾಂಬಿಕಾ ಸಮಾಧಿ
ಪೂಜ್ಯ ಬಸವಣ್ಣನವರ ನಂತರ ಶರಣ ಧರ್ಮದ ಇತಿಹಾಸ ಕೊಂಡಿ ಕಳಚಿದ ಸರಪಳಿಯ ತುಂಡುಗಳಾಗಿದ್ದರಿಂದ ಅನಿವಾರ್ಯವಾಗಿ ಬಹಳ ಜನರು ತಾವಿರುವ ಸ್ಥಳಗಳಲ್ಲಿ, ಸುತ್ತಮುತ್ತ ಅಂಥ ಕೊಂಡಿಗಳೇನಾದರು ಸಿಗುತ್ತವೋ ಎಂದು ಹುಡುಕುಲೆತ್ನಿಸಿದ್ದಾರೆ. ಬಸವಣ್ಣನವರಿಗೆ ಇಬ್ಬರು ಹೆಂಡತಿಯರಿದ್ದು ನೀಲಾಂಬಿಕೆಯೊಬ್ಬಳೇ ಸಂಗಮದ ಕಡೆಗೆ ಬಂದುದರಿಂದ, ಇನ್ನೊಬ್ಬಾಕೆ ಉಳವಿಯತ್ತ ನಡೆದ ಶರಣ ಸೈನ್ಯದಲ್ಲಿ ಇದ್ದಿರಬೇಕು ಎಂದು ಊಹಿಸಲಾಯಿತು. ಸುಮಾರು ವರ್ಷಗಳ ಹಿಂದೆ ಮುಗಟಖಾನ ಹುಬ್ಬಳ್ಳಿಗೆ ಹೋದಾಗ ಹೊಳೆಯಲ್ಲಿದ್ದ ಒಂದು ಗುಡಿ ಕುರಿತು ಕೇಳಿದಾಗ ಅಲ್ಲಿಯ ಜನ ಇದು ಹೊಳೆಗಂಗವ್ವನ ಗುಡಿ ಎಂದು ಹೇಳಿದ್ದರು. ಅವರುಗಳಿಗೆ ಇತಿಹಾಸದ ಬಗ್ಗೆ ಅಷ್ಟೊಂದು ಗಮನ ಇರದ್ದರಿಂದ ಹೀಗೆ ಹೇಳುತ್ತಿರಬಹುದು. ಅದು ಗಂಗಾಂಬಿಕೆಯದೇ ಎಂದು ನಾವು ಅಂದುಕೊಂಡೆವು. ಅದೇ ರೀತಿ ಅನೇಕರು ದಾಖಲೆ ಮಾಡಿ ಇತ್ತೀಚೆಗೆ ಗ್ರಂಥಗಳಲ್ಲಿ ಬರೆದಿದ್ದಾರೆ. ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನ ಸಮಾಧಿ ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದಲ್ಲಿದೆ. ಅಕ್ಕನಾಗಮ್ಮ ಬೀಡುಬಿಟ್ಟನಾಗಲಾಪುರ ರಕ್ಷಿಸಲ್ಪಟ್ಟಿದೆ. ಚನ್ನಬಸವಣ್ಣನ ತಂಗಿ ಅನುಷ್ಠಾನ ಮಾಡಿದ ತಾಣಗಳು ಅಲ್ಲಲ್ಲೇ ಗುರುತಿಸಲ್ಪಟ್ಟಿವೆ ಎಂದಾಗ ಗಂಗಾಂಬಿಕೆಯ ಗದ್ದುಗೆ ರಕ್ಷಿಸಲ್ಪಡುತ್ತಿರಲಿಲ್ಲವೆ ? ಹೀಗೆ ಹಲವಾರು ದಿಕ್ಕಿನಿಂದ ಆಲೋಚಿಸಿದಾಗಲೂ ಬಸವಣ್ಣನವರು ವಿವಾಹವಾದುದು ಒಬ್ಬಳನ್ನೇ. ಆಕೆಗೆ ವಿವಾಹಪೂರ್ವದ ಒಂದು ಹೆಸರು. ವಿವಾಹೋತ್ಸರದ ಇನ್ನೊಂದು ಹೆಸರು ಗಂಗಾಂಬಿಕೆ, ನೀಲಲೋಚನೆ ಎಂದು ಇದ್ದುದರಿಂದ ನಂತರದ ಕವಿಗಳು ಇಬ್ಬರನ್ನು ಬೇರೆ ಬೇರೆ ಮಾಡಿ ಕಲ್ಪಿಸಿಕೊಂಡಿದ್ದಾರೆ ಎಂದು ಖಚಿತವಾಗುವುದು.
ಬೇರೆ ಬೇರೆ ಶರಣರ ವಚನಗಳಲ್ಲಿ ಬರಿ ನೀಲಮ್ಮ, ನೀಲಲೋಚನೆ ಹೆಸರು ಮಾತ್ರ ಇದೆ. ಒಂದು ವೇಳೆ ಗಂಗಾಬಿಕೆ ಇದ್ದರೆ ಅವಳ ಹೆಸರನ್ನು ಖಂಡಿತ ಶರಣರು ತಮ್ಮ ವಚನಗಳಲ್ಲಿ ಹೇಳಿರುತ್ತಿದ್ದರು.
ಸಿದ್ಧರಾಮೇಶ್ವರರ ವಚನಗಳು
515
ಗುರು ಸಮಾಧಿಯ ಸಮ ತನ್ನ ಸಮಾಧಿಯ ಮಾಡಲಂದು,
ವೀರವಿಕ್ರಮಚೋಳನ ದೇಹ ಬಯಗೆ ಬಾಯಿದೆರೆದು ಬರಲಿಲ್ಲವೆ?
ಗುರು ಸಮಾಧಿಯ ಮುಂದೆ ತನ್ನ ಸಮಾಧಿಯ ಮಾಡಲಂದು,
ರಾಜೇಂದ್ರಚೋಳನ ದೇಹ ಎದ್ದು ನಮಿಸಿ ಸಮಾಧಿಯ ಹೋಗಲಿಲ್ಲವೆ?
ಇದರ ಕೀಲ ಪ್ರಮಥರು ಅರಿಯರೆ?
ಇದರಂದವ ಗೌರಿ ನಾಗಾಯಿ ಅರಿಯಳೆ?
ಇದರ ಕೀಲ ಕಪಿಲಸಿದ್ಧಮಲ್ಲಿಕಾರ್ಜುನ ಶರಣನ ರಾಣಿ
ನೀಲಾಂಬಿಕೆಯರಿಯಳೆ ಸೊಡ್ಡಯ್ಯಾ?
550
ಜ್ಞಾನಕ್ರಿಯಾಗಳಿಂದ ಲಿಂಗದಲ್ಲಿ ನಿಬ್ಬೆರಗಾದ ನೀಲಮ್ಮನ
ಪಾದದ ಕಂದ ನಾನು, ಪಾದದ ದಾಸ ನಾನು,
ಪಾದದ ಪಾದುಕೆ ನಾನು, ಪಾದುಕೆಯ ಧೂಳಿ ನಾನು,
ಕಪಿಲಸಿದ್ಧಮಲ್ಲಿಕಾರ್ಜುನ.
973
ಲಿಂಗವಾದಡೆ ಚೆನ್ನಬಸವಣ್ಣನಂತಾಗಬೇಕಯ್ಯಾ;
ವೀರನಾದಡೆ ಮಡಿವಾಳಯ್ಯನಂತಾಗಬೇಕಯ್ಯ;
ನಿಗ್ರಹಿಯಾದಡೆ ಹೊಡೆಹುಲ್ಲ ಬಂಕಯ್ಯನಂತಾಗಬೇಕಯ್ಯ;
ಧೀರನಾದಡೆ ಘಟ್ಟಿವಾಳಯ್ಯನಂತಾಗಬೇಕಯ್ಯ;
ಲಿಂಗದಲ್ಲಿ ನಿರ್ವಯಲಾದಡೆ
ನೀಲಲೋಚನೆಯಮ್ಮನಂತಾಗಬೇಕಯ್ಯ.
ಈ ಐವರ ಕಾರುಣ್ಯಪ್ರಸಾದವ ಕೊಂಡು ಬದುಕಿದೆನಯ್ಯ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
1334
ತಾಯೆ, ಪರಮ ಸುಖಾಚಾರದ ಮೂರ್ತಿಯನಡಗಿಸಿ ನೀನೆಯಾದೆಯವ್ವಾ.
ತಾಯೆ, ಮಹಾಜ್ಞಾನಕ್ಪತದಲ್ಲಿ ನೀನೆಯಡಗಿದೆಯವ್ವಾ.
ತಾಯೆ, ನೀಲಮ್ಮನೆಂಬ ಸುಖವಾಸಮೂರ್ತಿ,
ಕಪಿಲಸಿದ್ಧಮಲ್ಲಿನಾಥಯ್ಯ, ನಮ್ಮ ತಾಯೆ ನೀಲಮ್ಮನಾದಳು.
1706
ಲಿಂಗವ ಪೂಜಿಸಿದ ಫಲ ನೀಲಲೋಚನೆಗಾಯಿತ್ತು.
ಜಂಗಮವ ಪೂಜಿಸಿದ ಫಲ ಬಸವಣ್ಣಂಗಾಯಿತ್ತು.
ಮಂತ್ರವ ಪೂಜಿಸಿದ ಫಲ ಅಜಗಣ್ಣಂಗಾಯಿತ್ತು.
ಯೋಗವ ಪೂಜಿಸಿದ ಫಲ ಸಿದ್ಧರಾಮಂಗಾಯಿತ್ತು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ.
520
ನೀಲಲೋಚನೆಯಮ್ಮನ ಗರ್ಭದಿಂದುದಯವಾಗಿ ಬಂದವ ನಾನೆಂದು
ಬಸವಣ್ಣನ ಮನೆಗೆ ಶರಣೆನ್ನಹೋದರೆ
ಮಡಿವಾಳತಂದೆ, ಚನ್ನಬಸವಣ್ಣ, ಸಿದ್ಧರಾಮದೇವರು,
ಪ್ರಭುಸ್ವಾಮಿ, ಅಜಗಣ್ಣಯ್ಯಗಳು ಸಹವಾಗಿ
ಬಸವಣ್ಣನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು.
ಮಡಿವಾಳತಂದೆಯ ಮನೆಗೆ ಶರಣೆನ್ನ ಹೋದರೆ
ಚನ್ನಬಸವಣ್ಣ, ಸಿದ್ಧರಾಮಯ್ಯ, ಪ್ರಭುದೇವರು,
ಅಜಗಣ್ಣ ತಂದೆ, ಬಸವಣ್ಣ ಸಹವಾಗಿ
ಮಡಿವಾಳ ತಂದೆಯ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು.
ಚನ್ನಬಸವಣ್ಣನ ಮನೆಗೆ ಶರಣೆನ್ನಹೋದರೆ
ಸಿದ್ಧರಾಮಯ್ಯತಂದೆ, ಪ್ರಭುದೇವರು,
ಅಜಗಣ್ಣಯ್ಯಗಳು, ಬಸವರಾಜದೇವರು, ಮಡಿವಾಳಯ್ಯಗಳು ಸಹವಾಗಿ
ಚನ್ನಬಸವಣ್ಣನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು.
ಸಿದ್ಧರಾಮಯ್ಯನ ಮನೆಗೆ ಶರಣೆನ್ನಹೋದರೆ
ಪ್ರಭುದೇವ, ಅಜಗಣ್ಣಯ್ಯಗಳು, ಬಸವಣ್ಣ, ಮಡಿವಾಳಯ್ಯ,
ಚನ್ನಬಸವಣ್ಣನವರು ಸಹವಾಗಿ
ಸಿದ್ಧರಾಮಯ್ಯನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು.
ಪ್ರಭುವಿನ ಸ್ಥಲಕ್ಕೆ ಶರಣೆನ್ನಹೋದರೆ
ಅಜಗಣ್ಣ, ಬಸವಣ್ಣ, ಮಡಿವಾಳ, ಚನ್ನಬಸವಣ್ಣ,
ಸಿದ್ಧರಾಮಯ್ಯಗಳು ಸಹವಾಗಿ
ಪ್ರಭುವಿನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು.
ಅಜಗಣ್ಣಯ್ಯನ ಮನೆಗೆ ಶರಣೆನ್ನಹೋದರೆ
ಬಸವರಾಜ, ಮಡಿವಾಳತಂದೆ, ಚನ್ನಬಸವಣ್ಣ,
ಸಿದ್ಧರಾಮ, ಪ್ರಭುದೇವರು ಸಹವಾಗಿ
ಅಜಗಣ್ಣಯ್ಯಗಳ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು.
ಇಂತು ಬಲ್ಲಂತೆ ಕಂಡು ಶರಣೆಂದು ಸುಖಿಯಾದೆನು
ಗುರುನಿರಂಜನ ಚನ್ನಬಸವಲಿಂಗದಲ್ಲಿ. -- ದೇಶಿಕೆಂದ್ರ ಸಂಗನಬಸವಯ್ಯ
731
ನೀಲಲೋಚನೆಯಮ್ಮನವರ ಮನೆಯಲ್ಲಿ ನಿರ್ಮಲಪ್ರಸಾದವ ಕಂಡು
ನಿತ್ಯ ಸೇವಿಸಿ ಸುಖಾನಂದಸುಗ್ಗಿಯೊಳೋಲಾಡುತಿರ್ದೆನು.
ನಾಗಲಾಂಬಿಕೆಯವರ ಮನೆಯಲ್ಲಿ ಚಿತ್ಕಲಾಪ್ರಸಾದವ ಕಂಡು

ಅಕ್ಕಮಹಾದೇವಿಯವರ ಮನೆಯಲ್ಲಿ ನಿರಂಜನಪ್ರಸಾದವ ಕಂಡು

ಮುಕ್ತಾಯಕ್ಕಳ ಮನೆಯಲ್ಲಿ ನಿರವಯ ಸಂವಿತ್ಪ್ರಭಾನಂದಪ್ರಸಾದವ ಕಂಡು
ನಿತ್ಯ ಸೇವಿಸಿ ಗುರುನಿರಂಜನ ಚನ್ನಬಸವಲಿಂಗದಲ್ಲಿ
ಸುಖಾನಂದಸುಗ್ಗಿಯೊಳೋಲಾಡುತಿರ್ದೆನು. -- ದೇಶಿಕೆಂದ್ರ ಸಂಗನಬಸವಯ್ಯ
898
ಚಂಗಳೆಯಮ್ಮನ ಭಾವದೊಳ್ಮುಳುಗಿ ಪಂಚಾಚಾರಸ್ವರೂಪನಾಗಿರ್ದೆಕಾಣಾ.
ನಂಬಿಯಕ್ಕನ ಭಾವದೊಳ್ಮುಳುಗಿ ಮಂತ್ರಾತ್ಮಸ್ವರೂಪನಾಗಿರ್ದೆ ಕಾಣಾ.
ಚೋಳಿಯಕ್ಕನ ಭಾವದೊಳ್ಮುಳುಗಿ ನಿರೀಕ್ಷಣಾಸ್ವರೂಪನಾಗಿರ್ದೆ ಕಾಣಾ.
ನೀಲಲೋಚನೆಯಮ್ಮನ ಭಾವದೊಳ್ಮುಳುಗಿ ಯಜನಸ್ವರೂಪನಾಗಿರ್ದೆ ಕಾಣಾ.
ಅಮ್ಮವ್ವೆಯರ ಭಾವದೊಳ್ಮುಳುಗಿ ಸ್ತೌತ್ಯಸ್ವರೂಪನಾಗಿರ್ದೆ ಕಾಣಾ.
ಮಹಾದೇವಿಯರ ಭಾವದೊಳ್ಮುಳುಗಿ ವೇದಿಸ್ವರೂಪನಾಗಿರ್ದೆ ಕಾಣಾ.
ಇಂತು ಎನ್ನ ಮಾತೆಯರ ಭಾವದೊಳು ಸಮರಸವಾಗಿ
ಮುಕ್ತಾಯಕ್ಕನ ಗರ್ಭದೊಳು ನಿತ್ಯಪ್ರಸಾದಿಯಾಗಿರ್ದೆನು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ ನೀ ಸನ್ನಿಹಿತ. -- ದೇಶಿಕೆಂದ್ರ ಸಂಗನಬಸವಯ್ಯ
630
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣ ಮಹಾಘನಲಿಂಗವು
.... .... .... .... .... .... .... .... .... .... .... ....

ವಿಶ್ವಾಸದಿಂದ ಕೆಂಬಾವಿ ಭೋಗಣ್ಣಂಗೆ ಲಿಂಗ ಒಡನೆ ಹೋದುದಿಲ್ಲವೆ?
ಮತ್ತೆ ಇಷ್ಟಲಿಂಗದೊಳಗೆ ನೀಲಲೋಚನೆಯಮ್ಮನವರ
ಶರೀರವೆ ಏಕಾಕಾರವಾಗಲಿಲ್ಲವೆ ?

ಇಂತಪ್ಪ ಮಹಾಲಿಂಗದ ನಿಲವ ಅರಿದಾತ
ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ
ದುರ್ಭಾವಕರು ಎತ್ತ ಬಲ್ಲರು ನೋಡಾ ! -- ಗಣದಾಸಿ ವೀರಣ್ಣ
635
ಬಸವ ನೀಲಲೋಚನೆ ಇಬ್ಬರ ನಾಮಾಕ್ಷರ ಕೂಡಲು
ಎಂಟಕ್ಷರಗಳಾದವು.
ಆ ಎಂಟಕ್ಷರಗಳೇ ಮಾಯಾಖ್ಯ ಪಂಚಾಕ್ಷರವಾದವು,
ಮಾಯಾಖ್ಯ ಪಂಚಾಕ್ಷರ ಎಂತೆಂದಡೆ : ಓಂ ಹ್ರಾಂ ಹ್ರೀಂ ನಮಃಶಿವಾಯ.
ಸಾಕ್ಷಿ: 'ಬಕಾರಂ ಗುರುರೂಪಂ ಚ ಸಕಾರಂ ಲಿಂಗಮೇವ ಚ |
ವಕಾರಂ ಪರಮಾಖ್ಯಾತಂ ತ್ರಿವಿಧಂ ತತ್ತ್ವನಿರ್ಣಯಂ||
ನೀಲಲೋಚನೆ ಯಸ್ತು ನಾಮಾಕ್ಷರಂ ಪಂಚಕಂ |
ಸ್ತೋತ್ರಂ ವೇತ್ತಿ ತ್ರಿಸಂಧ್ಯಾಂ ಚ ಭಕ್ತಸ್ಸರ್ವಂ ಕಾಮಮೋಕ್ಷದಂ||'
ಎಂದುದಾಗಿ,
ಈ ಎಂಟಕ್ಷರವೇ ಎನ್ನ ಅಷ್ಟದಳಕಮಲದೊಳಗೆ
ಇಷ್ಟಲಿಂಗವಾಗಿ ನಿಂದ ನಿಲವ ತೋರಿದಾತ
ನಮ್ಮ ಶಾಂತಕೂಡಲಸಂಗಮದೇವ. -- ಗಣದಾಸಿ ವೀರಣ್ಣ
647
ಅಷ್ಟಾವರಣಗಳು ಯಾರಿಗೆ ಸಾಧ್ಯವಾಯಿತ್ತೆಂದಡೆ
ಹೇಳಿಹೆ ಕೇಳಿರಣ್ಣ : ಗುರು ಸಾಧ್ಯವಾಯಿತ್ತು ಗುರುಭಕ್ತಂಗೆ ;
ಲಿಂಗ ಸಾಧ್ಯವಾಯಿತ್ತು ನೀಲಲೋಚನೆತಾಯಿಗೆ ;
ಜಂಗಮವು ಸಾಧ್ಯವಾಯಿತ್ತು ಬಸವೇಶ್ವರದೇವರಿಗೆ ;
ಪಾದೋದಕ ಸಾಧ್ಯವಾಯಿತ್ತು ವೇಮನಾರಾಧ್ಯಂಗೆ ;
ಪ್ರಸಾದ ಸಾಧ್ಯವಾಯಿತ್ತು ಬಿಬ್ಬಿಬಾಚಯ್ಯಂಗೆ ;

ಇಂತೀ ಅಷ್ಟಾವರಣಗಳ, ಷಡುಸ್ಥಲದ ಮಾರ್ಗವನು
ಎನ್ನೊಳು ಅರುಹಿದಾತ, ನಮ್ಮ ಶಾಂತಕೂಡಲಸಂಗಮದೇವ. . -- ಗಣದಾಸಿ ವೀರಣ್ಣ
753
ಅಯ್ಯಾ ಬಸವಾದಿ ಪ್ರಮಥರೇ

ಇಂತಿವೆಲ್ಲವು ಷಟಸ್ಥಲವನಪ್ಪಿ ಅವಗ್ರಹಿಸಿದ
ನೀಲಾಂಬಿಕೆಯಮ್ಮನವರ ಗರ್ಭದಲ್ಲಿ ಉದಯವಾದ
ಮೋಹದಕಂದನಾದ ಕಾರಣ
ಎನಗೆ ಷಟಸ್ಥಲಮಾರ್ಗದ ವಿರತಿ ನೆಲೆಗೊಂಡು ನಿಂದಿತಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ. -- ಘನಲಿಂಗದೇವ
411
ಅಯ್ಯಾ, ಆದಿ ಅನಾದಿಯಿಂದತ್ತತ್ತ ಮೀರಿ ತೋರುವ
ನಿತ್ಯ ನಿರಂಜನ ಗುರು-ಲಿಂಗ-ಜಂಗಮ ಶಿವಶರಣರ
ಸತ್ಯ ಸನ್ಮಾರ್ಗದ ಗೊತ್ತಿನ ಮರ್ಯಾದೆಯನರಿಯದೆ
ಮತ್ರ್ಯದ ಜಡಜೀವಿ ಭವಿಪ್ರಾಣಿಗಳ ಹಾಂಗೆ
ಗುಹ್ಯಲಂಪಟಕಿಚ್ಛೆಸಿ ದಾಸಿ ವೇಶಿ ಸೂಳೆ ರಂಡೆ ತೊತ್ತುಗೌಡಿಯರ
ಪಟ್ಟ ಉಡಿಕೆ ಸೋವಿಯೆಂದು ಮಾಡಿಕೊಂಡು ಭುಂಜಿಸಿ,
ಷಟಸ್ಥಲ ಬ್ರಹ್ಮಾನುಭಾವವ ಕೇಳಿ ಹೇಳುವ
ಮೂಳ ಬೊಕ್ಕಿಯರ ಕಂಡು ಎನ್ನ ಮನ ನಾಚಿತ್ತು ಕಾಣೆ!
ಅವ್ವ ನೀಲವ್ವನ ಮೋಹದ ಮಗಳೆ!
ಅಪ್ಪ ಬಸವಣ್ಣನ ಸುಚಿತ್ತದ ಪು[ತ್ರಿಯೆ]!
ನಿಷ್ಕಳಂಕ ಸದ್ಗುರುಪ್ರಭುದೇವರ ಸತ್ಯದ ಸೊಸೆಯೆ!
ಅಣ್ಣ ಮಡಿವಾಳಪ್ಪನ ಭಾವ, ಚನ್ನಮಲ್ಲಿಕಾರ್ಜುನನರ್ಧಾಂಗಿಯೆ!
ಚಿಕ್ಕಯ್ಯಪ್ರಿಯ ಸಿದ್ಧಲಿಂಗನೊಡಹುಟ್ಟಿದವಳೆ!
ಎನ್ನಕ್ಕ ಮಹಾದೇವಿ ಕೇಳವ್ವ!
ಮರ್ತ್ಯದ ಜಡಜೀವಿ ಭ್ರಷ್ಟರ ಬಾಳಿವೆ ಎಂದೆ! -- ಘಟ್ಟಿವಾಳಯ್ಯ
674
ಜಂಗಮವೆ ಮಂತ್ರಮೂರ್ತಿ ನೋಡಯ್ಯ.

ಜಂಗಮವೆ ಬಸವ ಚನ್ನಬಸವ ನೀಲಲೋಚನೆ
ಅಕ್ಕಮಹಾದೇವಿ ಮೊದಲಾದ
ಪ್ರಮಥಗಣಂಗಳ ಪ್ರಾಣಲಿಂಗಮೂರ್ತಿ ನೋಡಯ್ಯ.
ಜಂಗಮವೆ ದಿಗಂಬರ ನಿರಾವಯಮೂರ್ತಿ ನೋಡಯ್ಯ.
ಜಂಗಮವೆ ನಿಷ್ಪ್ರಪಂಚ ನಿರಾಲಂಬ ನಿರ್ಗುಣ ನಿರಾತಂಕ
ನಿಶ್ಚಿಂತ ನಿಷ್ಕಾಮ ನಿಶ್ಶೂನ್ಯ ನಿರಂಗ ನಿರಂಜನಮೂರ್ತಿ
ಪರಮಾನಂದ ಪರಿಪೂರ್ಣ ಮಹಾಂತ ತಾನೆ ನೋಡ
ಸಂಗನಬಸವೇಶ್ವರ. -- ಗುರುಸಿದ್ಧದೇವರು
189
ಎನಗುಣಲಿಕ್ಕಿದರಯ್ಯ ಸಿರಿಯಾಳ-ಚೆಂಗಳೆಯರು.
ಎನಗುಡ ಕೊಟ್ಟರಯ್ಯಾ ದಾಸ- ದುಗ್ಗಳೆಯವರು.
ಎನ್ನ ಮುದ್ದಾಡಿಸಿದರಯ್ಯಾ ಅಕ್ಕನಾಗಮ್ಮನವರು.
ಎನ್ನ ಸಲಹಿದರಯ್ಯಾ ಅಮ್ಮವ್ವೆ ಕೊಡಗೂಸು
ಚೋಳಿಯಕ್ಕ ನಿಂಬವ್ವೆ ನೀಲಮ್ಮ ಮಹಾದೇವಿ ಮುಕ್ತಾಯಕ್ಕಗಳು.
ಇಂತಿವರ ಒಕ್ಕುಮಿಕ್ಕ ತಾಂಬೂಲ ಪ್ರಸಾದವ ಕೊಂಡು ಬದುಕಿದೆನಯ್ಯಾ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ. -- ಕೋಲ ಶಾಂತಯ್ಯ
924
ಪರಮನಪ್ಪಣೆಯಿಂದೆ ಧರೆಗಿಳಿದು ಬಂದು

ಅದೆಂತೆಂದೊಡೆ : ಸಂಗನಬಸವಣ್ಣನು ಕಪ್ಪಡಿಯಸಂಗಯ್ಯನೊಳಗೆ ಬಯಲಾದನು.
ಅಕ್ಕಮಹಾದೇವಿ, ಪ್ರಭುದೇವರು
ಶ್ರೀಶೈಲ ಕದಳಿಯ ಜ್ಯೋತಿರ್ಮಯಲಿಂಗದೊಳಗೆ ಬಯಲಾದರು.
ಹಡಪದಪ್ಪಣ್ಣ, ನೀಲಲೋಚನೆತಾಯಿ ಮೊದಲಾದ
ಕೆಲವು ಗಣಂಗಳು ತಮ್ಮ ಲಿಂಗದಲ್ಲಿ ಬಯಲಾದರು.
ಚೆನ್ನಬಸವಣ್ಣ, ಮಡಿವಾಳ ಮಾಚಿದೇವ,
ಕಿನ್ನರಿಯ ಬ್ರಹ್ಮಿತಂದೆ ಮೊದಲಾದ
ಉಳಿದ ಗಣಂಗಳು ಉಳಿವೆಯ ಮಹಾಮನೆಯಲ್ಲಿ
ಮಹಾಘನಲಿಂಗದೊಳಗೆ ಬಯಲಾದರು.

ಸೂಕ್ಷ್ಮಬಯಲೊಳಗೆನ್ನ
ನಿರವಯಲ ಮಾಡಿಕೊಳ್ಳಯ್ಯಾ ಅಖಂಡೇಶ್ವರಾ. -- ಷಣ್ಮುಖಸ್ವಾಮಿ
1283
ಅಯ್ಯಾ, ಹಲವು ದೇಶಕೋಶಗಳು, ಹಲವು ತೀರ್ಥಕ್ಷೇತ್ರಂಗಳು,

ದೇವ ನಿಮ್ಮ ಕೃಪಾದೃಷ್ಟಿಯಿಂದ ನೋಡಿ
ನಿಮ್ಮ ಸದ್ಭಕ್ತೆ ಶಿವಶರಣೆ ಅಕ್ಕ ನೀಲಾಂಬಿಕೆ ತಾಯಿಗಳ ತೊತ್ತಿನ
ತೊತ್ತು ಸೇವೆಯ ಮಾಡುವ ಗೌಡಿಯ ಚರಣವ
ಏಕಚಿತ್ತದಿಂದ ನೋಡಿ ಸುಖಿಸುವಂತೆ ಮಾಡಯ್ಯ.
ಎನ್ನಾಳ್ದ ಶ್ರೀಗುರುಲಿಂಗಜಂಗಮವೆ.
ಹರಹರ ಶಿವಶಿವ ಜಯಜಯ ಕರುಣಾಕರ,
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ. -- ಬಸವಲಿಂಗದೇವ
1211
ದಾಸ-ದುಗ್ಗಳೆಯವರ ತವನಿಧಿಪ್ರಸಾದವ ಕೊಂಡೆನಯ್ಯಾ.
ಸಿರಿಯಾಳ-ಚೆಂಗಳೆಯವರ ಪ್ರಾಣಪ್ರಸಾದವ ಕೊಂಡೆನಯ್ಯಾ.
ಸಿಂಧು-ಬಲ್ಲಾಳವರ ಸಮತಾಪ್ರಸಾದವ ಕೊಂಡೆನಯ್ಯಾ.
ಬಿಬ್ಬಬಾಚಯ್ಯಗಳ ಸಮಯಪ್ರಸಾದವ ಕೊಂಡೆನಯ್ಯಾ.
ಮಹಾದೇವಿಯಕ್ಕಗಳ ಜ್ಞಾನಪ್ರಸಾದವ ಕೊಂಡೆನಯ್ಯಾ.
ನೀಲಲೋಚನೆಯಮ್ಮನವರ ನಿರ್ವಯಲಪ್ರಸಾದವ ಕೊಂಡೆನಯ್ಯಾ.
ಇಂತೀ ಏಳ್ನೂರೆಪ್ಪತ್ತಮರಗಣಂಗಳ
ಒಕ್ಕುಮಿಕ್ಕ ಬಯಲಪ್ರಸಾದವ ಕೊಂಡು ಬದುಕಿದೆನು
ಕಾಣಾ ಗಾರುಡೇಶ್ವರಾ. --ಉಪ್ಪರಗುಡಿಯ ಸೋಮಿದೇವಯ್ಯ
1015
ಘಟ್ಟಬೆಟ್ಟದ ನಟ್ಟನಡುವಿನ ಗಿರಿಯಲ್ಲಿ

ಜ್ಞಾನಪರಬ್ರಹ್ಮದಲ್ಲಿ ನಿಂದವರಾರೆಂದರೆ : ಪ್ರಭುದೇವರು, ಚೆನ್ನಬಸವೇಶ್ವರದೇವರು,
ಮೋಳಿಗೆಯ್ಯನವರು, ಸಂಗನಬಸವೇಶ್ವರದೇವರು,
ನೀಲಾಂಬಿಕೆ ತಾಯಿ, ಅಕ್ಕನಾಗಮ್ಮ, ಮಹಾದೇವಿಯಕ್ಕ,
ಮುಕ್ತಾಯಿ ಮುಖ್ಯವಾದ ಏಳುನೂರಾ ಎಪ್ಪತ್ತು
ಅಮರಗಣಂಗಳ ಲೆಂಕರ ಲೆಂಕನಾಗಿ
ಎನ್ನ ಆದಿಪಿಂಡಿವ ಧರಿಸಿ,
ಮರ್ತ್ಯಕ್ಕೆ ಕಳುಹಿದ ಭೇದವ ಪಿಂಡಜ್ಞಾನದಿಂದಲರಿದು
ಆಚರಿಸುತ್ತಿದ್ದೆನಯ್ಯಾ ಎನ್ನಾಳ್ದ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. -- ಹೇಮಗಲ್ಲ ಹಂಪ
ಗುರು ಬಸವಣ್ಣನವರ ವಚನಗಳಲ್ಲಿ ನೀಲಲೋಚನೆ ಒಬ್ಬಳೇ ಹೆಸರು ಇದೆ. ಇದಲ್ಲದೆ ಅವರ ವಚನಗಳಲ್ಲಿ ಏಕ ಪತಿ/ಪತ್ನಿ ಬಗ್ಗೆ ಎಷ್ಟೊಂದು ವಚನ ಬರೆದಿರುವುದನ್ನು ನಾವು ಕಾಣುತ್ತೆವೆ. ಅಂಥಹವರು ಮತ್ತೆ ಎರಡು ಮದುವೆ ಸಾಧ್ಯವೇ ಇಲ್ಲ!.
ಒಡವೆ ಭಂಡಾರ ಕಡವರ ದ್ರವ್ಯವ
ಬಡ್ಡಿ ಬೆವಹಾರಕ್ಕೆ ಕೊಟ್ಟು

ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ,

ಕೂಡಲಸಂಗಮದೇವಾ. -- ಗುರು ಬಸವಣ್ಣ.
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

Comments
Post a Comment